Colossians 2

1ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಹಾಗೂ ನನ್ನನ್ನು ಮುಖಾಮುಖಿಯಾಗಿ ನೋಡದಿರುವವರೆಲ್ಲರಿಗಾಗಿಯೂ, 2ಅವರ ಹೃದಯಗಳು ಉತ್ತೇಜನಗೊಂಡು,
2:2 ಕೊಲೊ. 3:14
ಪ್ರೀತಿಯಿಂದ ಒಂದಾಗಿದ್ದು, ದೇವರ ಮರ್ಮವನ್ನು ಅಂದರೆ ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ ಬರುವ ನಿಶ್ಚಯವಾದ ಭಾಗ್ಯವನ್ನು ಪಡೆಯಬೇಕೆಂಬುದೇ ನನ್ನ ಅಪೇಕ್ಷೆ. ಅದಕ್ಕಾಗಿಯೇ ನಾನು
2:2 ಕೊಲೊ. 1:29; 4:12
ಎಷ್ಟು ಪ್ರಯಾಸಪಡುತ್ತಿದ್ದೇನೆಂಬುದು ನಿಮಗೆ ತಿಳಿದಿರಬೇಕೆಂದು ಬಯಸುತ್ತೇನೆ.
3
2:3 ಜ್ಞಾ. 2:1-5; ಯೆಶಾ. 11:2, 45:3; 1 ಕೊರಿ. 1:24, 30, 2:6-7
ಈ ಕ್ರಿಸ್ತನಲ್ಲಿಯೇ ಜ್ಞಾನ ಮತ್ತು ವಿವೇಕದ ಸರ್ವಸಂಪತ್ತು ಅಡಗಿದೆ.

4ಯಾರೂ ನಿಮ್ಮನ್ನು ತಮ್ಮ ಮನವೊಲಿಸುವ ಮಾತುಗಳಿಂದ ಮೋಸಗೊಳಿಸದಿರಲಿ ಎಂದು ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ. 5
2:5 1 ಕೊರಿ. 5:3
ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮನಿಂದ ನಿಮ್ಮೊಂದಿಗಿದ್ದು
2:5 1 ಕೊರಿ. 14:40
ನೀವು ಕ್ರಮಬದ್ಧವಾಗಿ ನಡೆಯುವುದನ್ನು ಮತ್ತು
2:5 1 ಪೇತ್ರ 5:9
ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವುದನ್ನೂ ನೋಡಿ ಸಂತೋಷಪಡುತ್ತೇನೆ.

ಕ್ರಿಸ್ತನು ನಿಜವಾದ ಜೀವವನ್ನು ಕೊಡುವಾತನು

6
2:6 ಕೊಲೊ. 1:10; 1 ಥೆಸ. 4:2
ನೀವು ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿದಂತೆಯೇ ಆತನಲ್ಲಿದ್ದವರಾಗಿ ಬಾಳಿರಿ.
7
2:7 ಎಫೆ. 3:18
ಆತನಲ್ಲಿ ಬೇರೂರಿಕೊಂಡು, ಆತನಲ್ಲಿ ಕಟ್ಟಲ್ಪಟ್ಟು ಮತ್ತು
2:7 ಎಫೆ. 4:21
ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತ ನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರ ಸಲ್ಲಿಸುವವರಾಗಿರಿ.

8
2:8 1 ತಿಮೊ. 6:20; ಎಫೆ. 5:6
ಮೋಸವಾದ ಮತ್ತು ವ್ಯರ್ಥವಾದ ತತ್ವಜ್ಞಾನ ಬೋಧನೆಯಿಂದ ಯಾರೂ ನಿಮ್ಮನ್ನು ವಶಮಾಡಿಕೊಳ್ಳದಂತೆ ಎಚ್ಚರಿಕೆಯಾಗಿರಿ. ಇವುಗಳು
2:8 ಮತ್ತಾ 15:2
ಮನುಷ್ಯರ ಸಂಪ್ರದಾಯಗಳಿಗೆ ಮತ್ತು
2:8 ಕೊಲೊ. 2:20; ಗಲಾ. 4:3
ಪ್ರಾಪಂಚಿಕ ಮೂಲ ಬೋಧನೆಗಳಿಗೆ ಸಂಬಂಧಿಸಿದವುಗಳೇ ಹೊರತು ಕ್ರಿಸ್ತನಿಗಲ್ಲ.
9ದೇವರ ಸರ್ವಸಂಪೂರ್ಣತೆಯು
2:9 ಕೊಲೊ. 1:19; ಯೋಹಾ. 1:14
ಕ್ರಿಸ್ತನ ದೇಹದಲ್ಲಿ ವಾಸಮಾಡುತ್ತಿದೆ,

10
2:10 ಎಫೆ. 1:21-22
ಆತನು ಎಲ್ಲಾ ದೊರೆತನಗಳಿಗೂ ಹಾಗೂ ಅಧಿಕಾರಿಗಳಿಗೂ ತಲೆಯಾಗಿರುವುದರಿಂದ
2:10 ಎಫೆ. 3:19
ಆತನಲ್ಲಿದ್ದುಕೊಂಡೇ ನೀವು ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ.
11ದೇವರು ಆತನಲ್ಲಿ ನಿಮಗೆ ಮನುಷ್ಯರ ಕೈಯಿಂದ ಮಾಡಲಾಗದಂತಹ ಸುನ್ನತಿಯನ್ನು ಮಾಡಿದ್ದಾನೆ. ಕ್ರಿಸ್ತನ ಸುನ್ನತಿಯು ಶಾರೀರಿಕವಾದ
2:11 ಕೊಲೊ. 3:9
ಪಾಪಸ್ವಭಾವವನ್ನು ತೆಗೆದುಹಾಕುವುದೇ.
12
2:12 ರೋಮಾ. 6:3-4
ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೀರಿ, ಮತ್ತು
2:12 ಅ. ಕೃ. 2:24; 1 ಕೊರಿ. 6:14; ಎಫೆ. 1:19
ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ಆತನ ಜೊತೆಯಲ್ಲಿ ನೀವು ಎದ್ದು ಬಂದಿದ್ದೀರಿ.

13ಅಪರಾಧಗಳನ್ನು ಮಾಡುವುದರಿಂದಲೂ ಹಾಗೂ ಸುನ್ನತಿಯಿಲ್ಲದ ಶರೀರಭಾವದಿಂದಲೂ
2:13 ಎಫೆ. 2:1
ಸತ್ತವರಾಗಿದ್ದ ನಿಮ್ಮನ್ನು
2:13 ಎಫೆ. 2:5
ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ ಮತ್ತು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ.
14
2:14 ರೋಮಾ. 7:4
ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ತೊಡೆದುಹಾಕಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗಿ ಮಾಡಿದನು.
15ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ
2:15 ನಿರಾಯುಧರಾಗಿ
ನಿರಾಯುಧರನ್ನಾಗಿ ಮಾಡಿ, ತನ್ನ
2:15 ಕ್ರಿಸ್ತನಲ್ಲಿ
ಶಿಲುಬೆಯ ಮೂಲಕ ಅವರನ್ನು ಜಯಿಸಿ ಬಹಿರಂಗಪಡಿಸಿದನು.

16ಹೀಗಿರುವುದರಿಂದ,
2:16 ರೋಮಾ. 14:17; ಇಬ್ರಿ. 9:10; ಯಾಜ. 11:2
ಅನ್ನಪಾನಗಳ ವಿಷಯದಲ್ಲಿಯೂ ಅಥವಾ
2:16 ಯಾಜ. 3:2; ರೋಮಾ. 14:5; ಮಾರ್ಕ 2:28
ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ
2:16 ರೋಮಾ. 14:3; 10, 13
ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ.
17
2:17 ಇಬ್ರಿ. 8:5; 10:1
ಇವುಗಳು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ, ಇವುಗಳ ನಿಜಸ್ವರೂಪವು ಕ್ರಿಸ್ತನೇ.

18
2:18-19 ವ. 23
ಕಪಟದೀನತೆಯನ್ನು ಅಪೇಕ್ಷಿಸಿ ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದು,
2:18-19 ಯೆಹೆ. 13:7
ದರ್ಶನಗಳಾದವೆಂದು ಕೊಚ್ಚಿಕೊಂಡು,
2:18-19 ರೋಮಾ. 8:7
ಪ್ರಾಪಂಚಿಕ ಬುದ್ಧಿಯಿಂದಾಗಿ, ಕಾರಣವಿಲ್ಲದೆ ಉಬ್ಬಿಕೊಂಡು ಇರುವಂಥವರಿಗೆ ನಿಮಗೆ ದೊರಕಿರುವ
2:18 1 ಕೊರಿ. 9:24
ಬಿರುದನ್ನು ಅಪಹರಿಸುವುದಕ್ಕೆ ಅವಕಾಶಕೊಡಬೇಡಿರಿ.
19ಇಂಥವನು
2:19 ಎಫೆ. 4:15-16
ಕ್ರಿಸ್ತನೆಂಬ ತಲೆಯೊಂದಿಗೆ ಸಂಬಂಧ ಕಳೆದುಕೊಂಡವನಾಗಿದ್ದಾನೆ, ತಲೆಯಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಪೋಷಣೆಯನ್ನು ಹೊಂದಿ, ಒಂದಾಗಿ ಜೋಡಿಸಲ್ಪಟ್ಟ ದೇಹವಾಗಿ, ದೇವರು ಕೊಡುವ ಅಭಿವೃದ್ಧಿಯಿಂದ ಬೆಳೆಯುತ್ತಾ ಬರುತ್ತದೆ.

20ಪ್ರಾಪಂಚಿಕವಾದ ಪ್ರಥಮಬೋಧನೆಯ ಪಾಲಿಗೆ ನೀವು
2:20 ರೋಮಾ. 6:4
ಕ್ರಿಸ್ತನೊಂದಿಗೆ ಸತ್ತವರಾಗಿದ್ದರೆ,
2:20 ಗಲಾ. 4:9
ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯಕಲ್ಪಿತ ಆಜ್ಞೆಗಳನ್ನು ಮತ್ತು ಉಪದೇಶಗಳನ್ನು ಅನುಸರಿಸಿ,
21
This verse is empty because in this translation its contents have been moved to form part of verse Col 2:22.
In this translation, this verse contains text which in some other translations appears in verses Col 2:21-Col 2:22.
22
2:21-22 ವ. 16; 1 ತಿಮೊ. 4:3; ಮತ್ತಾ 15:1-20; ಮಾರ್ಕ 7:1-23
<<ಇದನ್ನು ಹಿಡಿಯಬೇಡ, ಇದರ ರುಚಿನೋಡಬೇಡ, ಅದನ್ನು ಮುಟ್ಟಬೇಡ>> ಎನ್ನುವ
2:21-22 ಯೆಶಾ. 29:13; ಮತ್ತಾ 15:9
ನಿಬಂಧನೆಗಳಿಗೆ ಅಧೀನರಾಗಿರುವುದೇತಕ್ಕೆ? ಈ ಮಾನವ ಆಜ್ಞೆಗಳೂ ಹಾಗೂ ಬೋಧನೆಗಳೂ ಉಪಯೋಗದಿಂದ ನಾಶವಾಗುವ
2:21-22 1 ಕೊರಿ. 6:13
ಪದಾರ್ಥಗಳಿಗೆ ಅನುಸಾರವಾಗಿದೆ.
ಇಂಥ ಉಪದೇಶಗಳು ಮನುಷ್ಯಕಲ್ಪಿತವಾದ ಆಚರಣೆಗಳಿಂದಲೂ,
2:23 ವ. 18
ಕಪಟದೀನತೆಯಿಂದಲೂ ಮತ್ತು ದೇಹದಂಡನೆಯಿಂದಲೂ ಜ್ಞಾನವುಳ್ಳದೆಂದು ತೋರಿಬರುತ್ತವೆ, ಆದರೆ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸುವಲ್ಲಿ ಇವುಗಳಿಂದ
2:23 1 ತಿಮೊ. 4:8
ಯಾವ ಪ್ರಯೋಜನವೂ ಉಂಟಾಗುವುದಿಲ್ಲ.

23

Copyright information for KanULB